Arecanut Price : ರಾಶಿ ಇಡಿ ಅಡಿಕೆ ಧಾರಣೆ ‘ಅಬ್ ಕಿ ಬಾರ್ ₹60,000 ಪಾರ್ ಆಗಲಿದೆಯಾ?
ಕಳೆದ ತಿಂಗಳು ಏರಿಕೆ ಗ್ರಾಫ್ (Arecanut Price) ಕಂಡು ರೈತರಲ್ಲಿ ಸಂತಸ ಮೂಡಿಸಿದ ಶಿವಮೊಗ್ಗ ಅಡಿಕೆ ಧಾರಣೆ, ಮೇ ತಿಂಗಳಿನ ಪ್ರಾರಂಭದಲ್ಲಿ ಮತ್ತೊಂದು ಸಣ್ಣ ಮೊತ್ತದ ಏರಿಕೆ ದಾಖಲಿಸಿ, ಕಳೆದೊಂದು ವಾರದಿಂದ ಇಳಿಮುಖದ ಧಾರಣೆಯ ಕಡೆಗೆ ವಾಲಿದೆ. ಚುನಾವಣೆಯ ಪಲಿತಾಂಶ ಮತ್ತು ಪೂರ್ಣ ಪ್ರಮಾಣದ ನೀತಿ ಸಂಹಿತೆ ತೆರವು ಕಾಣುವವರೆಗೆ ಬಹುಶಃ ಅಡಿಕೆ ಧಾರಣೆ ದೊಡ್ಡ ಮಟ್ಟದ ಏರಿಳಿತವನ್ನು ಕಾಣಲಿಕ್ಕಿಲ್ಲ. ಆದರೆ ಕಳೆದ ವಾರ ಅಂದರೆ 14.05.2024ರಂದು ಗರಿಷ್ಠ ₹ 54,596 ದಾಖಲಿಸಿದ್ದ ರಾಶಿ ಇಡಿ ಧಾರಣೆ,…