ರೈತರೇ ಗಮನಿಸಿ : ‘ಫಸಲ್ ಭೀಮಾ’ ಬೆಳೆ ವಿಮೆ ನೋಂದಣಿ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಜಿಲ್ಲೆಯಲ್ಲಿ ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮು ಅವಧಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಪಂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ. ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ ಮತ್ತು ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘÀಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ(ಹಳ್ಳಿ, ಗ್ರಾಮಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡಲಾಗುವುದು.

ವಿಮಾ ಯೋಜನೆಯಡಿ ಒಳಪಡುವ ನೀರಾವರಿ ಬೆಳೆಗಳಾದ ಕೆಂಪು ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳಾಗಿವೆ.
*ಕೆಂಪು ಮೆಣಸಿನಕಾಯಿ: ಬಳ್ಳಾರಿ, ಕಂಪ್ಲಿ, ಕುರುಗೋಡು, ಕೋಳೂರು, ಮೋಕಾ, ರೂಪನಗುಡಿ, ಸಿರುಗುಪ್ಪ, ಕರೂರು, ತೆಕ್ಕಲಕೋಟೆ, ಹಚ್ಚೋಳ್ಳಿ, ತೋರಣಗಲ್ಲು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.1,07,500 ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.5,375 ಆಗಿರುತ್ತದೆ.
*ಈರುಳ್ಳಿ:* ಸಂಡೂರು ತಾಲ್ಲೂಕಿನ ಚೋರನೂರು ಹಾಘೂ ತೋರಣಗಲ್ಲು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.80,500 ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.4,025 ಆಗಿರುತ್ತದೆ.

ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278177 ಹಾಗೂ ಮೊ.9480257282, ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08395-260389 ಹಾಗೂ ಮೊ.9740934208, ಕಂಪ್ಲಿ ಮತ್ತು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08396-222066 ಹಾಗೂ ಮೊ.9448910277 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಸಲ್ ಭೀಮಾ ಯೋಜನೆ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗಿನಂತಿದೆ

1.PMFBY ಯ ಅಧಿಕೃತ ವೆಬ್‌ಸೈಟ್‌ಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಭೇಟಿ ನೀಡಬೇಕು https://pmfby.gov.in

2. ಫಸಲ್ ಭೀಮಾ ಯೋಜನೆಯ ಮುಖಪುಟವು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

3.ಚೆಕ್ ಅಪ್ಲಿಕೇಶನ್ ಸ್ಥಿತಿ ನಿಮಗೆ ಕಾಣಿಸುತ್ತದೆ.
ಇಲ್ಲಿ ನೀವು ನಿಮ್ಮ ಬೆಳೆ ವಿಮೆಯ ರಶೀದಿ ಸಂಖ್ಯೆ ಮತ್ತು “ಕ್ಯಾಪ್ಚಾ ಕೋಡ್” ಅನ್ನು ನಮೂದಿಸಬೇಕು ಮತ್ತು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಅನ್ನು ಕ್ಲಿಕ್ ಮಾಡಬೇಕು.

4.ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ PMFBY ಪೋರ್ಟಲ್‌ಗೆ ಲಾಗ್ ಇನ್ ಆಗುತ್ತೀರಿ.

ಈ ಪ್ರಕ್ರಿಯೆಯ ಮೂಲಕ, ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು. ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಫಲಾನುಭವಿಗಳ ಪಟ್ಟಿ 2023 ರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬೇಕು.

ಬೆಳೆ ನಷ್ಟ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ವಿಧಾನ:

ಹಂತ:1
ರೈತರ ಮೊದಲಗೆ ಗೂಗಲ್ ನಲ್ಲಿ ಹೋಗಿ ಬೆಳೆ ಪರಿಹಾರ ಎಂದು ಟೈಪ್ ಮಾಡಿ ಸರ್ಚ್ ಕೊಡಿ. ಅಥವಾ ನಾವು ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಬಹುದು.
https://parihara.karnataka.gov.in/Pariharahome/

ಕ್ಲೀಕ್ ಮಾಡಿದ ನಂತರ ಈ ರೀತಿಯ ಮುಖಪುಟ ಕಾಣಿಸಿಕೊಳ್ಳುತ್ತದೆ.

ಹಂತ:2
ಇಲ್ಲಿ ಮೇಲುಗಡೆ ನೀವು ಕನ್ನಡ ಅಥವಾ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಒಂದನ್ನು ನೀವು ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದಿನ ಹಂತಗಳಲ್ಲಿ ಸಾಗಬಹುದು.

ಹಂತ:3
ಇಲ್ಲಿ ಪರಿಹಾರ ಸೇವೆಗಳು ಎಂಬ ಪಟ್ಟಿ ನಿಮಗೆ ಕಾಣುತ್ತದೆ ಅಲ್ಲಿರುವ ಕಾಲನ್ನಲ್ಲಿ ಡೇಟಾ ಎಂಟ್ರಿ ಪ್ರಗತಿ ವರದಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕೆಳಗಡೆ ತೋರಿಸುವ ಫೋಟೋ ದಲ್ಲಿ ಇರುವಂತೆ ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇರುತ್ತದೆ.

ಹಂತ: 4
ಇಲ್ಲಿ ಕ್ಲಿಕ್ ಮಾಡಿದ ನಂತರ ಕ್ಲಿಕ್ ಮಾಡಿದ ನಂತರ ವಿವಿಧ ಆಯ್ಕೆಗಳನ್ನು ನಿಮಗೆ ಕೇಳುತ್ತದೆ ಅಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ಪಾರ್ಟಿಯನ್ನು ನೀವು ಪಡೆದುಕೊಳ್ಳಬಹುದು.

ಇದೇ ರೀತಿ ರೈತ ಪರ ಹಾಗೂ ಜನಪರ ಯೋಜನೆಗಳ ಸೌಲಭ್ಯಗಳು ಹಾಗೂ ಅವುಗಳ ಭರ್ತಿ ಮಾಡುವ ವಿಧಾನಕ್ಕಾಗಿ ನಮ್ಮ ಕೃಷಿ ತಾಣದ ಟೆಲಿಗ್ರಾಂ ಗ್ರೂಪಿಗೆ ಈ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಜಾಯಿನ್ ಆಗಿ:
https://telegram.me/krishimahaiti

Leave a Reply

Your email address will not be published. Required fields are marked *