Ration Card:ಮೋಬೈಲ್ ನಲ್ಲಿಯೇ ಹೊಸ ರೇಷನ್ ಕಾರ್ಡ್ ಪಡೆಯಿರಿ! ಡೈರೆಕ್ಟ ಲಿಂಕ್ ಕ್ಲಿಕ್ ಮಾಡಿ

ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತರದಿಂದ ಕಾಯುತ್ತಿರುವ ಈಗ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರೇಷನ್ ಕಾರ್ಡ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಹಳೆಯ ರೇಷನ್ ಕಾರ್ಡ್ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಏನೆಂದರೆ ನೀವು ಹೋಗುವ ಎಲ್ಲಾ ಸ್ಥಳದಲ್ಲೂ ರೇಷನ್ ಕಾರ್ಡ್ ಹಾರ್ಡ್ ಕಾಪಿ ತೆಗೆದುಕೊಂಡು ಹೋಗುವುದು ಕಷ್ಟ ಅಥವಾ ಒಮ್ಮೊಮ್ಮೆ ತೆಗೆದುಕೊಂಡು ಹೋಗಲು ಮರೆತು ಹೋಗಬಹುದು.

ಇದಕ್ಕೆ ಸರ್ಕಾರ ಇ – ರೇಷನ್ ಕಾರ್ಡ್ ಬಿಡುಗಡೆ ಮಾಡಿದ್ದು, ನೀವು ಆನ್ಲೈನ್ ಮೂಲಕವೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ (Download Online) ಮಾಡಿ ಇಟ್ಟುಕೊಳ್ಳಬಹುದು. ನೀವು ಯಾವಾಗ ಎಲ್ಲಿ ಬೇಕಾದರೂ ಇ- ರೇಷನ್ ಕಾರ್ಡ್ ಬಳಸಿಕೊಳ್ಳಬಹುದು.

ಆನ್ಲೈನ್ ಮೂಲಕ ಹೆಸರು ಸೇರಿಸುವ ವಿಧಾನ –
• ಮೊದಲು ಆಹಾರ ಪೂರೈಕೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ವೆಬ್ಸೈಟ್ ಹೊಂದಿವೆ.
• ವೆಬ್ಸೈಟ್ ಗೆ ಲಾಗಿನ್ ಆದ ನಂತ್ರ ಐಡಿ ರಚಿಸಬೇಕು. ಈಗಾಗಲೇ ಐಡಿ ರಚಿಸಿದ್ದರೆ ಲಾಗಿನ್ ಆಗಬೇಕು.
• ಲಾಗಿನ್ ಆದ್ಮೇಲೆ ಹೊಸ ಸದಸ್ಯರ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಹೊಸ ಫಾರ್ಮ್ ಕಾಣಿಸುತ್ತದೆ.
• ಅಲ್ಲಿ ಕುಟುಂಬಸ್ಥರ ಎಲ್ಲ ಮಾಹಿತಿ ಭರ್ತಿ ಮಾಡಬೇಕು. ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಬೇಕು. ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
• ನಂತರ ನಮೂನೆ ಸಲ್ಲಿಕೆಯ ನಂತರ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಫಾರ್ಮ್ ಅನ್ನು ಈ ಪೋರ್ಟಲ್ ನಲ್ಲಿ ಟ್ರ್ಯಾಕ್ ಮಾಡಬಹುದು. ಅಧಿಕಾರಿಗಳು ನಮೂನೆ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ನಮೂನೆಯನ್ನು ಸ್ವೀಕರಿಸಲಾಗುತ್ತದೆ ಮತ್ತು ಪಡಿತರ ಚೀಟಿಯನ್ನು ಅಂಚೆ ಮೂಲಕ ಮನೆಗೆ ತಲುಪಿಸಲಾಗುತ್ತದೆ.

ಮೋಬೈಲ್ ನಲ್ಲಿಯೇ ರೇಷನ್ ಕಾರ್ಡ್ ಡೌನ್ಲೋಡ್(DOWNLOAD )ಮಾಡುವುದು ಹೇಗೆ?
• ನಿಮ್ಮ ಮೋಬೈಲ್ ನಲ್ಲಿಯೇ ಪ್ಲೇ ಸ್ಟೋರ್(Play Store ) ಓಪನ್ ಮಾಡಿ.
* ನಿಮ್ಮ ಮೊಬೈಲ್ ನಲ್ಲಿ ಡಿಜಿಲಾಕರ್(DG Locker) ಅಪ್ಲಿಕೇಶನ್ ಮೊದಲು ಡೌನ್ಲೋಡ್ ಮಾಡಿಕೊಳ್ಳಿ
* ಈಗ ಅಪ್ಲಿಕೇಶನ್ ನಲ್ಲಿ ಸೈನ್ ಇನ್(sign in) ಆಗಿ ರೇಷನ್ ಕಾರ್ಡ್ ಎನ್ನುವ ಆಯ್ಕೆ ಮಾಡಿ.
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.
* ನಂತರ ಡೌನ್ಲೋಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಮೊಬೈಲ್ ನಲ್ಲಿ ಇ- ರೇಷನ್ ಕಾರ್ಡ್ ಡೌನ್ಲೋಡ್ ಆಗಿರುತ್ತೆ.

ಅದೇ ರೀತಿ ಈಗ ರಾಜ್ಯ ಸರಕಾರ ಈಗಾಗಲೇ ಗೃಹಲಕ್ಷ್ಮೀ ಯೋಜನೆಯನ್ನು ಪ್ತತೀ ಯಜಮಾನಿಗೂ ತಲುಪಿಸಬೇಕು ಅನ್ನೋ ಉದ್ದೇಶದಿಂದಲೇ ಅದಾಲತ್‌ ನಡೆಸಲಾಗಿದೆ. ಅಧಿಕಾರಿಗಳನ್ನು ಮನೆ ಮನೆಗೆ ಕಳುಹಿಸಿ ಸರ್ವೆ ಕಾರ್ಯವನ್ನೂ ನಡೆಸಲಾಗಿತ್ತು. ಜೊತೆಗೆ ಆಧಾರ್‌ ಸೀಡಿಂಗ್‌ (Aadhaar Seeding Process), ರೇಷನ್‌ ಕಾರ್ಡ್‌ ಈ ಕೆವೈಸಿ (Ration Card ekyc) ಕಾರ್ಯವನ್ನೂ ಮಾಡಿಸಲಾಗಿತ್ತು. ಯಾರಿಗೆ ಇನ್ನೂ ಗೃಹ ಲಕ್ಷ್ಮಿ ಹಣ ಬಂದಿಲ್ಲ ಅವರೆಲ್ಲರೂ ಸಹ ಜಾಗರೂಕತೆಯಿಂದ ಈ ಕೆಲಸವನ್ನು ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಭೇಟಿ ನೀಡಿ ಪರಿಶೀಲನೆ ಮಾಡಿ.

ಹೊಸ ರೇಷನ್ ಕಾರ್ಡ್ ಅರ್ಜಿ ಎಲ್ಲಿ ಸಲ್ಲಿಸಬೇಕು?
ನಿಮ್ಮ ಊರಿನಲ್ಲಿರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಗರಿಕ ಸೇವಾ ಕೇಂದ್ರ ಅಥವಾ ನ್ಯಾಯ ಬೆಲೆ ಅಂಗಡಿ ಭೇಟಿ ನೀಡಿ ನೀವು ನಿಮ್ಮ ಹೊಸ ರೇಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಸಹ ಮಾಡಲು ಸರ್ಕಾರವು ಒಪ್ಪಿಗೆ ನೀಡಿದೆ.

ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

• https://ahara.kar.nic ವೇಬ್ಸೈಟ ಭೇಟಿ ನೀಡಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ನಿಮ್ಮ ಹೆಬ್ಬೆರಳು ಗುರುತಿನ ಮುಖಾಂತರ ನೋಡುವುದು.
• ಅದೇ ರೀತಿ ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ.
• ರೇಷನ್ ಕಾರ್ಡ್ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.
• ನಂತರ ಅಲ್ಲಿ ಹೊಸ ರೇಷನ್ ಕಾರ್ಡ್ ಎಂಬ option ಬರುತ್ತದೆ,
• ಅದಾದ ನಂತರ ಹೊಸ ಕಾರ್ಡ್ ಪಡೆಯಲು ಅರ್ಜಿಗಾಗಿ ಕನ್ನಡ ಅಥವಾ ಇಂಗ್ಲೀಷನ್ನು ಆಯ್ಕೆ ಮಾಡಿಕೊಳ್ಳಬೇಕು.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಆಗ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ OTP ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಅಲ್ಲಿ ನೀಡುವ ಕ್ಯಾಪ್ಟರ್ ಸರಿಯಾಗಿ ಟೈಪ ಮಾಡಿ Go ಮೇಲೆ ಕ್ಲಿಕ್ ಮಾಡಿ ನಂತರ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಕಾಣುತ್ತವೆ.
• ನಂತರ ಅಲ್ಲಿ ನೀವು ಹಾಕಿರುವ ಆಧಾರ್ ಮಾಹಿತಿ ಸರಿಯಾಗಿ ಇದ್ದರೆ Add ಒತ್ತಿ , ಅಲ್ಲಿ ಕುಟುಂಬ ಸದಸ್ಯರ ಮಾಹಿತಿ ಹಾಗೂ ಕುಟುಂಬದ ಯಜಮಾನನಿಗೆ ಇರುವ ಸಂಬಂಧಗಳನ್ನು ಅಲ್ಲಿ ನಮೂದಿಸಿದ ನಂತರ ಅಪ್ಲಿಕೇಶನ್ ನಂಬರ್ ಜನರೇಟ್ ಆಗುತ್ತದೆ.
• ನಂತರ ನೀವು 70 ರೂಪಾಯಿ ಪಾವತಿಸಿ ಪಡೆಯಬೇಕು. ಇದು ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ.

Leave a Reply

Your email address will not be published. Required fields are marked *