2024ರ ದೊಡ್ಡ ಮಳೆ ಯಾವಾಗ! IMD 27 ಜಿಲ್ಲೆಗೆ ಆರೆಂಜ್ ಅಲರ್ಟ್

ಆತ್ಮೀಯ ಬಂಧುಗಳೇ ಎಲ್ ನೀನು ಎಂಬ ವೈಪರಿತ್ಯ ಕಾರಣದಿಂದಾಗಿ ಈ ಕಳೆದು 15 ಅಥವಾ ಒಂದು ವಾರಗಳಿಂದ ಮಳೆಯಾಗುತ್ತಿದೆ. ಮತ್ತು ಈ ಮುಂಬರುವ ಮುಂಗಾರು ಹಾಗೂ ದಿನಮಾನಗಳಲ್ಲಿ ಎಷ್ಟು ಮಳೆಯಾಗಲಿದೆ. ಎಂಬುದನ್ನು ಐ ಎಂ ಡಿ ಭಾರತೀಯ ಹವಾಮಾನ ಇಲಾಖೆ ಸಂದೇಶ ನೀಡಿದೆ. ಇದರ ಪ್ರಕಾರ ತಮ್ಮ ಜಿಲ್ಲೆಯ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಿ ಭಾರತೀಯ ಹವಾಮಾನ ಇಲಾಖೆಯು ರಾಜ್ಯದ 27 ಜಿಲ್ಲೆಗಳನ್ನು ಆರೆಂಜ್ ಅಲರ್ಟ್ ಆಗಿ ಘೋಷಿಸಿದೆ. ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಕರ್ನಾಟಕದ ಬೇಸಿಗೆ ಮಧ್ಯವು ಬಿರುಗಾಳಿ ಸಹಿತ ಧಾಕಾರಾರ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಒಟ್ಟು 27 ಜಿಲ್ಲೆಗಳು ‘ಮಹಾಮಳೆ’ಗೆ ಸಾಕ್ಷಿಯಾಗಲಿವೆ.ಗರಿಷ್ಠ 20 ಸೆಂಟಿ ಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ಸಂಪೂರ್ಣ ಮಾಹಿತಿಯನ್ನು ಕೊನೆಯವರೆಗೂ ನೋಡಿ.

ನಮ್ಮ ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳು ಬಿರು ಬೇಸಿಗೆಗೆ ತತ್ತರಿಸಿದ್ದವು. ಹಾಗೂ ಎಷ್ಟೋ ಪ್ರಮಾಣದ ಹಾನಿಯೂ ಕೂಡ ಬೆಳೆಗಳಿಗೆ ಅನಾವೃಷ್ಟಿಯಿಂದ ಆಗಿತ್ತು. ಇದೀಗ ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಳೆ ಬರುತ್ತಿದೆ. ಕಳೆದ ಮೂರು ದಿನದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಜೋರು ಮಳೆಯಾಗುತ್ತಿದೆ. ಇನ್ನು ಮುಖ್ಯ ಮಾಹಿತಿಯನ್ನು ಭಾರತೀಯ ಹವಮಾನ ಇಲಾಖೆಯು ನೀಡಿದೆ.

ಸದ್ಯ ಹವಾಮಾಣದಲ್ಲಿ ತೀವ್ರ ರೂಪದ ಬದಲಾವಣೆಗಳು ಆಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 27 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಸುರಿಯಲಿದೆ. ಹವಾಮಾನ ಇಲಾಖೆ ವರದಿ ನೀಡಿದೆ. ಇದು ವರ್ಷದ ಮಹಾಮಳೆ ಆಗುವ ಸಾಧ್ಯತೆ ಇದೆ.

ಈ 27 ಜಿಲ್ಲೆಗಳಿಗೆ ಮಹಾಮಳೆ ನಿರೀಕ್ಷೆ

ಹೀಗಾಗಿ ನಾಳೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಹಾಸನ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಮಳೆ ಆರ್ಭಟ ಕಂಡು ಬರಲಿದೆ.

ಹವಾಮಾನ ಇಲಾಖೆ ಪ್ರಕಾರ ಈ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ 12ರಿಂದ 20 ಸೆಂಟಿ ಮೀಟರ್‌ವರೆಗೂ ಮಳೆ ಸುರಿಯುವ ನಿರೀಕ್ಷೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ಮುಂದಿನ ದಿನಗಳಲ್ಲಿ ಭಾರತ ದೇಶದ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದು ಸಮಾಧಾನ ತಂದಿದೆ. ಏಪ್ರಿಲ್ 19 ಮತ್ತು 21 ರಂದು ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಬಿರುಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ವರುಣ ದೇವನನ್ನ ಪ್ರಾರ್ಥಿಸುತ್ತಿದ್ದಾರೆ, ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ಸಿಂಚನ ಮೂಡಿದ್ದು, ಚಿಕ್ಕೋಡಿ ತಾಲೂಕಿನಾದ್ಯಂತ ಇಂದು ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆ ಸುರಿದಿದ್ದು, ಬೇಸಿಗೆಯಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದೆ.

ಅದೇ ರೀತಿ ಮುಂದಿನ 2 ದಿನಗಳಲ್ಲಿ ನೋಡಿದರೆ ಬೆಂಗಳೂರು, ಮಳೆಯಿಲ್ಲದ ಸುದೀರ್ಘ ಬೇಸಿಗೆ ಋತುವನ್ನು ಮುರಿಯುವ ನಿರೀಕ್ಷೆಯಿದೆ. ಕಳೆದ 148 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿಲ್ಲ. ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನವು ಈ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ “ಸಾಮಾನ್ಯ” ಮಾನ್ಸೂನ್ (moderate mansoon) ಅನ್ನು ಮುನ್ಸೂಚಿಸಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಸಾಕಷ್ಟು ಮಳೆಯನ್ನು ಪಡೆದರೆ, ಬಿಹಾರ ಮತ್ತು ಪಶ್ಚಿಮ ಬಂಗಾಳವು ಜುಲೈ ಮತ್ತು ಆಗಸ್ಟ್‌ನ ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಕೊರತೆಯನ್ನು ಎದುರಿಸಬಹುದು. ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಆಗಾಗ ಕೃಪೆ ತೋರುತ್ತಿರುವ ಮಳೆರಾಯ ತಂಪೆರೆಯುತ್ತಿದ್ದಾರೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ (7cm ಗೂ ಅಧಿಕ) ಬರುವ ಕಾರಣಕ್ಕೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.

ಅದರಂತೆ ಸರ್ಕಾರವು ಕೂಡ ರೈತರಿಗೆ ಹಾನಿಯಾಗದಂತೆ ಹಾಗೂ ರೈತರ ಕಷ್ಟಗಳಿಗೆ ಪರಿಹಾರ ನೀಡಲು ಸರ್ಕಾರವು ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ರೈತರು ತಮ್ಮ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರ ನೀಡಲು ಸರ್ಕಾರ ಪ್ರವಾಹದ ಆಧಾರದ ಮೇಲೆ ನೀಡುತ್ತದೆ. ಅದೇ ರೀತಿ ಈಗ ರೈತರು ಸಹ ತಮ್ಮ ಸುತ್ತ ಆಗುವ ಮಳೆ, ಗಾಳಿ, ಹವಾಮಾನ ಬದಲಾವಣೆ ಇವೆಲ್ಲವುಗಳನ್ನು ತಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಲು ಒಂದು ಮೌಸಮ್ ಎಂಬ ಆ್ಯಪ್ ಬಂದಿದೆ. ಕೂಡಲೇ ರೈತರು ಇದನ್ನು ಬಳಸಿಕೊಂಡು ಕೃಷಿಯಲ್ಲಿ ಹವಾಮಾನದ ಬಗ್ಗೆ ಮಾಹಿತಿ ಪಡೆಯಬೇಕು. ಇಂದು ಕರ್ನಾಟಕದಲ್ಲಿ ಕೆಲವೊಂದು ಭಾಗಗಳಲ್ಲಿ ಅಂದರೆ ಈ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಏಕೆಂದರೆ ಈಗಾಗಲೇ ಮಳೆ ಬಹಳ ದಿನಗಳಿಂದ ಬಂದಿಲ್ಲ ಹಾಗೂ ಆಕಸ್ಮಿಕ ಮಳೆಗಳು ಹೆಚ್ಚಾಗಬಹುದು ಹಾಗೂ ಹಾನಿಗಳನ್ನು ಸಹ ಉಂಟು ಮಾಡಬಹುದು ಏಕೆಂದರೆ ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ ಹೀಗಾಗಿ ಯಾವುದೇ ರೀತಿ ಮಳೆಗಳಾದರೂ ವಿಶೇಷವಾಗಿರುತ್ತವೆ ಅಂದರೆ ಹಾನಿ ಆಗಿರಬಹುದು ಹಾಗೂ ರೈತರಿಗೆ ಅನುಕೂಲಕರವಾಗಿರಬಹುದು.

ಮಂಡ್ಯ ನಗರದ ಮಳವಳ್ಳಿ ತಾಲೂಕಿನ ಕೆಲವೆಡೆ 20 ನಿಮಿಷ ಮಳೆ ಸುರಿದಿದೆ. ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯಿಂದ ಸಕ್ಕರೆ ನಾಡು ರೈತರ‌ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಬಳ್ಳಾರಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಜಿಲ್ಲೆಯ ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ತೋರಣಗಲ್ಲಿನಲ್ಲಿ ಗುಡುಗು ಸಮೇತ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಚಂಡಮಾರುತದ ಮುನ್ಸೂಚನೆ ನೀಡಿದ್ದು, ಆಗ್ನೇಯ ರಾಜಸ್ಥಾನದ ಮೇಲೆ ಚಂಡಮಾರುತದ ಪರಿಚಲನೆ ಇದೆ ಎಂದು ಹೇಳಿದೆ. ಇದರ ಪ್ರಭಾವದಿಂದ ಇಂದು ಮತ್ತು ನಾಳೆ (ಏ.15, 16 ಏಪ್ರಿಲ್) ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ವಿದರ್ಭ, ಮರಾಠವಾಡ, ಮಧ್ಯ ಮಹಾರಾಷ್ಟ್ರದಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *