Agri Implements Subsidy: ಎಲ್ಲಾ ಕೃಷಿ ಉಪಕರಣಗಳ ಮೇಲೆ 50% ಸಬ್ಸಿಡಿ!

ಸರ್ಕಾರವು ಯಂತ್ರೋಪಕರಣಗಳ ಸಬ್ಸಿಡಿ ವಿತರಣೆಗೆ ಮುಂದಾಗಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಿದೆ. ಇದರ ಉದ್ದೇಶ ಏನೆಂದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪೂರೈಕೆ ಸರಪಳಿ ಮತ್ತು ಬೆಂಬಲ ಚಟುವಟಿಕೆಗಳ ವ್ಯಾಪಕ ಜಾಲವನ್ನು ಸ್ಥಾಪಿಸುವ ಮೂಲಕ ಈ ಮಹಾನ್ ದೇಶದಾದ್ಯಂತ ನಮ್ಮ ನವೀನ ಉಪಕರಣಗಳು, ಬಿಡಿಭಾಗಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಸೇವೆ ಸೌಲಭ್ಯ ರೈತರಿಗೆ ಸಿಗುತ್ತದೆ.

ಕೃಷಿ ಉಪಕರಣ ಸಬ್ಸಿಡಿ ಯೋಜನೆಯ ಪಡೆಯಲು ಬೇಕಾಗುವ ಅರ್ಹತೆ –

ನೀವು ಕೃಷಿ ಸಲಕರಣೆ ಸಬ್ಸಿಡಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರ ಇವೆಲ್ಲ ಅರ್ಹತೆ ಮುಖ್ಯವಾಗಿ ಬೇಕಾಗಿರುವುದು.
* ರೈತರು ರಾಜ್ಯದ ಸ್ಥಳೀಯವಾಗಿರಬೇಕು.
* ಈ ರಾಜ್ಯದ ರೈತರಿಗೆ ಮಾತ್ರ ಕೃಷಿ ಸಲಕರಣೆ ಸಬ್ಸಿಡಿ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
* ಈ ಯೋಜನೆಯನ್ನು ವಿಶೇಷವಾಗಿ ಕನಿಷ್ಠ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ರೈತರಿಗಾಗಿ ಪ್ರಾರಂಭಿಸಲಾಗಿದೆ.
* ಯೋಜನೆಯಡಿ ಫಲಾನುಭವಿ ರೈತರು ಶೇ.50 ಸಬ್ಸಿಡಿಯೊಂದಿಗೆ ಕೃಷಿ ಉಪಕರಣಗಳನ್ನು ಖರೀದಿಸಬಹುದು.
* ಇದರಿಂದ ರೈತರಿಗೆ ಆರ್ಥಿಕ ನೆರವು ದೊರೆಯಲಿದ್ದು, ಇದರಿಂದ ಅವರ ಜೀವನ ಮಟ್ಟ ಹೆಚ್ಚಲಿದೆ.

ಅದೇ ರೀತಿ ಸರ್ಕಾರವು ಈಗ ರೈತ ಸಂಪರ್ಕ ಕೇಂದ್ರ ವತಿಯಿಂದ ಸಾಮಾನ್ಯ general category ವರ್ಗದ ರೈತರು ಗಮನಕ್ಕೆ ಕೃಷಿ ಯಂತ್ರೋಪಕರಣಗಳಾದ
ನೇಗಿಲು,ರೂಟರ್ ,ಚಾಪ್ ಕಟರ್,ಡಿಸೇಲ್ ಇಂಜಿನ್,HTP, ಗಳನ್ನು ಪಡೆಯಲು ಅನುದಾನ ಬಿಡುಗಡೆಯಾಗಿದ್ದು ಆಸ್ತಕ ರೈತರು ನಾಳೆ,ನಾಡಿದ್ದು ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಈ ಮೂಲಕ ತಿಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಯಾವ ಯಾವ ಸೌಲಭ್ಯವೂ ಇದೆ ಎಂದು ತಿಳಿಯಬೇಕು.

ಈ ಯೋಜನೆಯನ್ನು ಪಡೆಯಲು ರೈತರು ಏನು ಮಾಡಬೇಕು?

• ಮೊದಲಿಗೆ ರೈತರು ಯಾವುದೇ ಯೋಜನೆಯ ಲಾಭ ಪಡೆದಿರಬಾರದು.
• ರೈತರು ಕಡ್ಡಾಯವಾಗಿ ಎಫ್ ಐಡಿ (FID) ಹೊಂದಿರಬೇಕು.
• ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಪಹಣಿ ಉತಾರ ಲಿಂಕ್ ಆಗಿರಬೇಕು.
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು.
• ರೈತ ಸಂಪರ್ಕ ಕೇಂದ್ರಗಳಲ್ಲಿ ನೊಂದಣಿ ಆಗಿರಬೇಕು.
• ರೈತರು ಚಿಕ್ಕ ಹಿಡುವಳಿ ಹೊಂದಿರಬೇಕು.

ಕೃಷಿ ಯಾಂತ್ರೀಕರಣದ ಪ್ರಯೋಜನಗಳನ್ನು ಸಣ್ಣ ಮತ್ತು ಅತಿ ಸಣ್ಣ ಮತ್ತು ದೇಶದ ಎಲ್ಲಾ ಪ್ರದೇಶಗಳಿಗೆ ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಿಗೆ ಸರಿಯಾದ ಪರಿಗಣನೆಯೊಂದಿಗೆ ಎಲ್ಲಾ ವರ್ಗದ ರೈತರಿಗೆ ವಿಸ್ತರಿಸಬೇಕು. ಕೃಷಿ ಯಾಂತ್ರೀಕರಣವು ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಕಠಿಣ ಮತ್ತು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಉತ್ಪಾದನಾ ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಸುಧಾರಿಸುವ ಮೂಲಕ ಪರಿಸರ ಕೆಲಸಗಾರ ಸ್ನೇಹಿಯಾಗಬೇಕು. ಕೃಷಿ ಯಾಂತ್ರೀಕರಣವು ಭೂಮಿ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆಗೆ ಕೊಡುಗೆ ನೀಡಬೇಕು ಮತ್ತು ಬೀಜ, ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಶಕ್ತಿಯಂತಹ ಒಳಹರಿವಿನ ಹೆಚ್ಚು ಪರಿಣಾಮಕಾರಿ ಬಳಕೆಗೆ ಕೊಡುಗೆ ನೀಡಬೇಕು.

ಹೊಸ FID ರೈತ ನೋಂದಣಿ ಅಥವಾ ನಿಮ್ಮ FID ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು

1) ಆಧಾರ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3 ) ಉತಾರ್ / ಖಾತೆ ಉತಾರ್
ಹಾಗೂ ಇತ್ತೀಚಿನ ಭಾವಚಿತ್ರ ಪಾಸ್ ಪೋರ್ಟ್ ಸೈಜ್ ನೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಗ್ರಾಮ ಲೆಕ್ಕಾಧಿಕಾರಿ (ತಲಾಟಿ) ಕಛೇರಿಗೆ ಭೇಟಿ ನೀಡಲು ಈ ಮೂಲಕ ತಿಳಿಸಲಾಗಿದೆ.

ಬೇಕಾಗುವ ಅಗತ್ಯ ದಾಖಲಾತಿಗಳು

1) ಅರ್ಜಿ ನಮೂನೆ
2) ಭಾವಚಿತ್ರ 2
3) ಉತಾರ & ಖಾತೆ ಉತಾರ
4) ಆಧಾರ ಕಾರ್ಡ
5) ಬ್ಯಾಂಕ ಪಾಸಬುಕ್ಕ
6) 20 ರೂ ಬಾಂಡ 1 ಪಾರ್ಟಿ- ರೈತರ ಹೆಸರು
2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಗೋಕಾಕ/ಮೂಡಲಗಿ
7) 20 ರೂ ಬಾಂಡ ಜಂಟಿ ಖಾತೆ ಹೊಂದಿದವರ ರೈತರಗೆ ಮಾತ್ರ
1ಪಾರ್ಟಿ- ರೈತರ ಹೆಸರು
2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು.
8) ನೀರು& ಬೆಳೆ ಪ್ರಮಾಣ ಪಾತ್ರ
9) ಪಂಚಾಯತಿ ಠರಾವ್
10) ಜಾತಿ ಪ್ರಮಾಣ ಪಾತ್ರ- ಪರಿಶಿಷ್ಟ ಜಾತಿ & ಪಂಗಡ ರೈತರಿಗೆ ಮಾತ್ರ
11) ಆರ್ ಸಿ ಬುಕ ( ಟ್ರಾಕರ್ ಚಾಲಿತ ಉಪಕರಣಗಳಿಗೆ ಮಾತ್ರ)
12) ನಿರಕ್ಷೇಪಣಾ ಪ್ರಮಾಣ ಪತ್ರ ( NOC) – ತೋಟಗಾರಿಕೆ ಇಲಾಖೆಯಿಂದ ಪರವಾನಿಗೆ.

Leave a Reply

Your email address will not be published. Required fields are marked *