Crop loan waiver amount :ನಿಮ್ಮ ಬೆಳೆಸಾಲ ಮನ್ನಾ ಹಣ ಬಿಡುಗಡೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರೀಯ ರೈತರೇ ಕೃಷಿ ಜಾಗೃತಿ ಜಾಲತಾಣಕ್ಕೆ ಸ್ವಾಗತ. ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಬಂಪರ್ ಶುಭ ಸುದ್ದಿಯನ್ನು ನೀಡಿದೆ. ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಹಾಗೂ ರೈತರಿಗೆ ಕೃಷಿಯಲ್ಲಿ ಬೆಳೆ ಬೆಳೆಯಲು ಹಲವಾರು ರೂಪಗಳಲ್ಲಿ ಸಾಲವನ್ನು ಸರ್ಕಾರ ಈಗಾಗಲೇ ನೀಡುತ್ತಿದೆ. ಅದೇ ರೀತಿ ರೈತರಿಗೆ ಆರ್ಥಿಕ ಸಂಕಷ್ಟ ಪರಿಹಾರ ನೀಡಲು ಸರ್ಕಾರ ರೈತರು ತಾವು ಮಾಡಿದ ಬೆಳೆಸಾಲದ ಹಣವನ್ನು ಸರ್ಕಾರವು ಮನ್ನಾ ಮಾಡಿದ್ದು, ರೈತರು ಬೆಳೆಸಾಲ ಮನ್ನಾದ ಬಗ್ಗೆ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಮೂಲಕ ಸಾಲಮನ್ನಾದ ಸಂಪೂರ್ಣ ಮಾಹಿತಿ ಪಡೆಯಲು ಈ ಕೆಳಗಿನ ವಿಷಯವನ್ನು ಸಂಪೂರ್ಣವಾಗಿ ಓದಿ. ಈ ಬಾರಿ ಬರಗಾಲದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿ ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಬರಗಾಲದ ಪರಿಸ್ಥಿತಿ ಉಂಟಾಗಿದೆ. ರೈತರು ಬೆಳೆ ಬೆಳೆಯಲು ಬೀಜ, ಗೊಬ್ಬರ ಮತ್ತು ಔಷಧಿಗಾಗಿ ಹಲವು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಅಂತಹ ರೈತರ ಸಾಲದ ಬಡ್ಡಿ ಮನ್ನಾ ಮಾಡುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

ಮಳೆಯ ಅಭಾವದಿಂದ ನಮ್ಮ ರಾಜ್ಯದಲ್ಲಿ ಈ ವರ್ಷ ಬರಗಾಲದ ಪರಿಸ್ಥಿತಿ ತೀವ್ರವಾಗಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿಲ್ಲ. ರೈತರು ಕೃಷಿಗೆ ಹಾಕಿದ ಬೀಜ, ಗೊಬ್ಬರ ಮತ್ತು ಔಷಧಿಗಳ ಹಣವೇ ಅವರು ಬೆಳೆದ ಬೆಳೆಯಿಂದ ಬಂದಿಲ್ಲ. ಕೆಲವೊಬ್ಬ ರೈತರು ಈ ಬೀಜ, ಗೊಬ್ಬರ ಮತ್ತು ಔಷಧಿಗಾಗಿ ಸಹಕಾರಿ ಸಂಘಗಳಿಂದ ಸಾಲ ಸೌಲಭ್ಯವನ್ನು ಪಡೆದಿದ್ದಾರೆ. ಆದರೆ ಈ ವರ್ಷ ಬರಗಾಲದಿಂದ ಆ ಸಾಲವನ್ನು ಕಟ್ಟಲು ರೈತರಿಂದ ಸಾಧ್ಯವಿಲ್ಲ. ಇವತ್ತಿನ ಈ ಸುದ್ದಿಯು ರೈತರ ಸಾಲ ಮನ್ನಾ (Crop loan waiver money) ಕುರಿತ ಮಾಹಿತಿಯಾನ್ನು ಹೊಂದಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಆದರೆ, ಈ ಮಾಹಿತಿಯನ್ನು ನಿಮ್ಮ ಕುಟುಂಬದ ಮತ್ತು ಊರಿನ ರೈತರಿಗೆ ಶೇರ್ ಮಾಡಿ. ಅವರಿಗೆ ಈ ಮಾಹಿತಿಯಿಂದ ಸಾಲ ಮನ್ನಾದ (Crop loan waiver money) ಬಗ್ಗೆ ಮಾಹಿತಿ ತಿಳಿಯಲು ತುಂಬಾ ಸುಲಭವಾಗುತ್ತದೆ. 2023-24 ಸಾಲಿನಲ್ಲಿ ರಾಜ್ಯದಲ್ಲಿ ಬರಗಾಲ ಸೃಷ್ಟಿಯಾದ ಕಾರಣ ಸರ್ಕಾರವು ರೈತರ ಸಾಲದ ಬಡ್ಡಿ ಮನ್ನಾದ (Crop loan waiver money) ಸಲುವಾಗಿ ಸುಮಾರು 582 ಕೋಟಿ ಹಣ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಆದ್ದರಿಂದ ರೈತರ ಸಾಲದ ಬಡ್ಡಿ ಮನ್ನಾ ಆಗಲು ಏನು ಮಾಡಬೇಕು? ನಿಮ್ಮ ಸಾಲದ ಬಡ್ಡಿ ಕೂಡ ಮನ್ನಾ ಆಗುತ್ತಾ? ಎಷ್ಟು ಸಾಲದ ಬಡ್ಡಿ ಮನ್ನಾ ಆಗುತ್ತದೆ? ಸಾಲದ ಬಡ್ಡಿ ಮನ್ನಾ ಆಗಲು ಹೇಗೆ ಅರ್ಜಿ ಹಾಕಬೇಕು? ಯಾವಾಗ ಈ ರೈತರ ಸಾಲದ ಬಡ್ಡಿ ಮನ್ನಾ (Crop loan waiver money) ಆಗುತ್ತೆ? ಎಂಬ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಈ ಕೆಳಗೆ ನೀಡಲಾದ ಮಾಹಿತಿಯಲ್ಲಿ ಉತ್ತರ ಸಿಗಲಿದೆ. ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದಿ.

ಏನಿದು ಬೆಳೆಸಾಲ(crop loan) ಮನ್ನಾ?

ಬೆಳೆಸಾಲ ಎನ್ನುವುದು ರೈತರಿಗೆ ಕೃಷಿಯಲ್ಲಿ ಉತ್ಪನ್ನಗಳನ್ನು ತೆಗೆಯಲು ಚಟುವಟಿಕೆಗಳಿಗೆ ಸರ್ಕಾರವು ಸಾಲದ ರೂಪದಲ್ಲಿ ಹಣವನ್ನು ರೈತರಿಗೆ ನಿಡುತ್ತದೆ. ಅದೇ ರೀತಿ ರೈತರು ಆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಾವತಿ ಮಾಡುವ ನಿಯಮ ಇರುತ್ತದೆ. ಹಾಗಾಗಿ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡಲು ಸರ್ಕಾರವು ಮೂರು ವಿಧಗಳಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಹೀಗೆ ನೀಡುತ್ತಿದೆ.

How to check status of croploan waiver ?👉(ಬೆಳೆಸಾಲ ಮನ್ನಾ ಸ್ಟೇಟಸ ಹೇಗೆ ಚೆಕ್ ಮಾಡಬೇಕು?)ಬನ್ನಿ ಬೆಳೆಸಾಲ ಮನ್ನಾ ಸ್ಟೇಟಸ್ ಚೆಕ್ ಮಾಡುವ ವಿಧಾನ ತಿಳಿಯೋಣ.

ನಿಮ್ಮ ಬೆಳೆ ಮೇಲೆ ಇರುವ ಸಾಲವನ್ನು ಸರ್ಕಾರವು ಮನ್ನಾ ಮಾಡಿದೆಯೋ ಅಥವಾ ಇಲ್ಲವೇ ಎಂಬುದನ್ನು ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಮೂಲಕ ತಿಳಿಯಬಹುದು‌.

• ಮೊದಲಿಗೆ ಗೂಗಲ್ ನಲ್ಲಿ https://clws.karnataka.gov.in/clws/pacs/citizenreport/ https://clws.karnataka.gov.in/clws/pacs/citizenreport/ ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಂತರ ಅಲ್ಲಿ service for citizens (ನಾಗರಿಕ ಸೇವೆಗಳು) ಎಂದು ತೋರಿಸುತ್ತದೆ.

• ನಂತರ ಅಲ್ಲಿ CLWS (ನಾಗರಿಕರ ವರದಿ) ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

• ನಂತರ ಅಲ್ಲಿ ಬೆಳೆಸಾಲ ಮನ್ನಾ ವರದಿ ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ತಿಳಿಯಬೇಕು.

ನಂತರ Let’s ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆಸಾಲ ಮನ್ನಾ ಬಗ್ಗೆ ಮಾಹಿತಿ ಪಡೆಯುವುದು.

ಕೃಷಿ ಸಾಲ ಮನ್ನಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ. ಈಗಾಗಲೇ ರೈತರ ಬೆಳೆಗಳು ಬಿಸಿಲಿನ ತಾಪ ಹಾಗೂ ಮಳೆಯ ಅಭಾವದಿಂದ ಸಂಪೂರ್ಣ ನಾಶವಾಗಿವೆ. ಅದೇ ರೀತಿ ಈ ವರ್ಷ ರೈತರ ಬೆಳೆಗಳು ಮಳೆಯ ಅಭಾವದಿಂದಾಗಿ ನಾಶವಾಗಿವೆ. ಆದ್ದರಿಂದ ರೈತರಿಗೆ ಪರಿಹಾರ ಒಡ್ಗಿಸುವ ನಿಟ್ಟಿನಲ್ಲಿ ಬೆಳೆ ವಿಮೆ, ಬೆಳೆ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ರೈತರು ಕೃಷಿಗಾಗಿ ಮಾಡಿದ ಸಾಲದ ಬಡ್ಡಿ ಮನ್ನಾ (Crop loan waiver money) ಮಾಡುವ ಘೋಷಣೆಯನ್ನು ಮಾಡಿದೆ. ಕರ್ನಾಟಕದ ಬಜೆಟ್ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಈ ಮಾಹಿತಿಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.ಈ ಹಿಂದೆ ಪ್ರತಿ ರೈತರಿಗೆ 50,000 ರಂತೆ 21 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು. ಅದಕ್ಕೆ ಒಟ್ಟು 7631 ಕೋಟಿ ಏಷ್ಟು ಆದಾಯ ಹಕಬೇಕಾಗಿತ್ತು. ಇದರಿಂದ ಹಲವು ಸಹಕಾರಿ ಬ್ಯಾಂಕ್ ಗಳಿಗೆ ಸಾಕಷ್ಟು ನಷ್ಟ ಸಂಭವಿಸಿತ್ತು.ಇದಲ್ಲದೆ ಈ ಬಾರಿ ಹಿಂದೆ ಅಲ್ಪಾವಧಿಗೆ ಬಡ್ಡಿ ಇಲ್ಲದೆ ನೀಡುತ್ತಿದ್ದ 3 ರಿಂದ 5 ಲಕ್ಷವನ್ನು 10 ರಿಂದ 15 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.

ಇದರ ಜೊತೆಗೆ ಮುಂದೆ ರಾಜ್ಯದ 36 ಲಕ್ಷ ರೈತರಿಗೆ 27 ಸಾವಿರ ಕೋಟಿವರೆಗೆ ಸಾಲವನ್ನು ಕೃಷಿಗಾಗಿ ನೀಡುವುದಾಗಿ ತಿಳಿಸಿದ್ದಾರೆ.ಈ ಕೃಷಿ ಸಾಲದ ಬಡ್ಡಿ ಮನ್ನಾ ಮಾಡುವುದರಲ್ಲಿ ಸರ್ಕಾರ ಬರಿ 16 ಪ್ರಮುಖ ಬೆಳೆಗಳನ್ನು ಒಳಗೊಂಡಿದೆ. ಆದರೆ ಇತರ ಬೆಳೆಗಳಾದ ಅಡಿಕೆ, ಬಾಳೆ, ದ್ರಾಕ್ಷಿ, ಟೊಮೆಟೊ ಇನ್ನಿತರ ಬೆಳೆಗಳಿಗೆ ಸಾಲದ ಬಡ್ಡಿ ಮನ್ನಾದಲ್ಲಿ ಅಳವಡಿಸಿಲ್ಲ. ಅದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿ ಆಗಿದ್ದಾಗ ಕೃಷಿ ಮೇಲೆ ಸಲ ಮಾಡಿದ ಹಲವು ರೈತರ ಸುಮಾರು 1 ಲಕ್ಷದವರೆಗೆ ಸಾಲವನ್ನು ಮನ್ನಾ ಮಾಡಿದ್ದರು. ಇದರಿಂದ ಹಲವು ರೈತರು ಲಾಭ ಪಡೆದು ಖುಷಿ ಪಟ್ಟಿದ್ದರು. ಆದರೆ ಈ ಸಾಲ ಮನ್ನಾ ಯೋಜನೆಯಿಂದ 2017 ರ ಹಿಂದೆ ಸಾಲ ಪಡೆದ ರೈತರ ಸಾಲ ಮಾತ್ರ ಮನ್ನಾ ಆಗಿದೆ. ಈ ವರ್ಷವು ಸಾಲ ಮನ್ನಾ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *