ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೂ ಕೃಷಿ ತಾಣ ಸಾಮಾಜಿಕ ಜಾಲತಾಣಕ್ಕೆ ಸ್ವಾಗತ, ದೇಶಾದ್ಯಂತ ಬೆಳೆ ನಷ್ಟ ಹಾಗೂ ಬೆಳೆ ಹಾನಿಯಿಂದ ಆಗುವ ನಷ್ಟವನ್ನು ಬರಿಸಲು ಕೇಂದ್ರ ಸರ್ಕಾರವು ಫಸಲ ಭೀಮಾ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈ ಯೋಜನೆ ಜಾರಿ ಅದಾಗಿನಿಂದ ರೈತರಿಗೆ ಬೆನ್ನೆಲುಬಾಗಿ ಈ ಯೋಜನೆಯು ನಿಂತಿದೆ ಹಾಗೂ ಈ ಯೋಜನೆಗಳ ನಿಯಮಗಳು ಬದಲಾಗುತ್ತಾ ಇರುತ್ತದೆ. ಈ ಯೋಜನೆಯಡಿ ರೈತರು ಬೆಳೆ ಹಾನಿ ಅಥವಾ ಬೆಳೆ ಪರಿಹಾರ ಪಡೆಯಲು ತಮ್ಮ ಬೆಳೆಗಳ ವಿಮೆಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಈ ಉಪಾಯದಿಂದ ತಮ್ಮ ಬೆಳೆಗಳನ್ನು ರೈತರು, ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಹಾಗೂ ಆದಾಯಕ್ಕೂ ಧಕ್ಕೆ ಆಗುವುದಿಲ್ಲ. ಈ ಯೋಜನೆ ಎಲ್ಲಾ ನಿಯಮಗಳು ಹಾಗೂ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ.
ಫಸಲ್ ಭೀಮಾ ಯೋಜನೆಯಿಂದ ರೈತರು ಹಣಕಾಸಿನ ನೆರವನ್ನು ಕೂಡ ಪಡೆಯಬಹುದು ಹಾಗೂ ಕಟಾವಿನ ನಂತರ ಒಮ್ಮೊಮ್ಮೆ ಆಕಾಲಿಕ ಮಳೆಗಳು ಅಥವಾ ಇತರೆ ಕಾರಣಗಳಿಂದ ಆದ ಹಾನಿಯನ್ನು ಈ ಯೋಜನೆ ಅಡಿ ಕೇಂದ್ರ ಸರ್ಕಾರವು ಬರಿಸುತ್ತದೆ ಈ ರೀತಿ ಭರಿಸುವುದರಿಂದ ರೈತರು ಬೆಳೆಗಳನ್ನು ಬೆಳೆಯಲು ಹಿಂಜರಿಯಲಾರರು ಹಾಗೂ ಆದಾಯದ ಮೂಲವೂ ಕೂಡ ತಗ್ಗುವುದಿಲ್ಲ. ಹಾಗೂ ಸರಕಾರದಿಂದ ಹಣಕಾಸಿನ ನೆರವು ಕೂಡ ಸಿಗುತ್ತದೆ. ವಿವಿಧ ರೀತಿಯ ಪ್ರಕೃತಿಯ ವಿಕೋಪಗಳಿಂದಲೂ ಬೆಳೆ ಹಾನಿ ಆದಾಗ ಬೆಳೆ ಪರಿಹಾರವನ್ನು ಬರಿಸಲಾಗುವುದೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇಂತಹ ವಿವಿಧ ಕಾರಣಗಳಿಂದ ಬೆಳೆ ಹಾನಿಯ ರಕ್ಷಣೆಗಾಗಿ ಸರ್ಕಾರ ಪನತೊಟ್ಟಿದೆ. ಈ ಯೋಜನೆ ಅಡಿ ರೈತರು ತಮ್ಮ ಬೆಳೆಯ ವಿಮೆಗೆ ನಿಗದಿಪಡಿಸಲಾದ ಪ್ರೀಮಿಯಂ ಹಣದ ಮೌಲ್ಯವನ್ನು ಪಾವತಿಸಬೇಕಾಗುತ್ತದೆ. ಸರ್ಕಾರದಿಂದ ಖರೀಫ ಹಾಗೂ ರಬಿ ಬೆಳೆಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಖರಿಪ್ ಬೆಳೆಗಳಿಗೆ 2 ಪ್ರತಿಶತ ಪ್ರೀಮಿಯಂನ್ನು ಹಾಗೂ ರಬಿ ಬೆಳೆಗಳಿಗೆ 1.5% ಪ್ರೀಮಿಯಂಅನ್ನು ಭರಿಸಬೇಕಾಗುತ್ತದೆ. ವಾಣಿಜ್ಯ ಅಥವಾ ತೋಟಗಾರಿಕಾ ಬೆಳೆಗಳಿಗೆ 5% ಪ್ರೀಮಿಯಂ ಅನ್ನು ರೈತರು ಪಾವತಿಸಬೇಕಾಗುತ್ತದೆ. ಈ ವಿಮೆಗಳನ್ನು ರೈತರು ವಿಮೆ ಕಂಪನಿಗಳಿಂದ ಮಾಡಿಕೊಳ್ಳಬೇಕಾಗುತ್ತದೆ.
ಬೆಳೆ ಹಾನಿಯಾದರೆ ರೈತರು ಏನು ಮಾಡಬೇಕು?
ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆಯಲು, ನಾವು ಬೆಳೆ ನಷ್ಟವಾದ 72 ಗಂಟೆಗಳ ಒಳಗೆ ನಾವು ವಿಮೆ ಮಾಡಿಸಿದ ವಿಮಾ ಕಂಪನಿ ಅಥವಾ ಹತ್ತಿರದ ಕೃಷಿ ಕಚೇರಿಗೆ ತಿಳಿಸಬೇಕು. ಹೀಗೆ ತಿಳಿಸಿದರೇ ಮಾತ್ರ ನಾವು ಯೋಜನೆಯ ಪ್ರಯೋಜನೆ ಪಡೆಯಲು ನಾವು ಅರ್ಹರಾಗುತ್ತೇವೆ. ಆಗ ಮಾತ್ರ ಬ್ಯಾಂಕ್, ವಿಮಾ ಕಂಪನಿ ಮತ್ತು ಕೃಷಿ ಕಚೇರಿ ನಷ್ಟವನ್ನು ಸುಲಭವಾಗಿ ಅಂದಾಜು ಮಾಡಿಸಿ ಪರಿಹಾರ ನೀಡಬಹುದು. ನಂತರ ಪರಿಹಾರ ಪಾವತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ವಿಮಾ ಕಂಪನಿ ಅಥವಾ ಕೃಷಿ ಕಚೇರಿಯ ತಂಡವು ಜಮೀನಿಗೆ ಬಂದು ಹಾನಿಯ ಪರೀಕ್ಷಿಸಿ, ಪ್ರಮಾಣವನ್ನು ನಿರ್ಣಯಿಸುತ್ತದೆ. ಪರಿಹಾರಕ್ಕಾಗಿ ರೈತರು ಅರ್ಜಿ ಫಾರಂನ್ನು ಭರ್ತಿ ಮಾಡಬೇಕು. ಮತ್ತು ಹಾನಿಗೆ ಹಾಗೂ ಜಮೀನಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ವಿಮಾ ಕಂಪನಿಯು ಅರ್ಜಿಯನ್ನು ಪರಿಗಣಿಸಿ ಪರಿಹಾರವನ್ನು ರೈತರ ಖಾತೆಗೆ ಹಣವನ್ನು ಜಮೆ ಮಾಡುತ್ತದೆ. ಬೆಳೆಯು ಕನಿಷ್ಠ ಶೇ.33 ಅಥವಾ ಅದಕ್ಕಿಂತ ಹೆಚ್ಚು ಬೆಳೆ ನಷ್ಟವಾದರೆ ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ. ಬೆಳೆ ವಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಅಥವಾ ನಿಮ್ಮ ವಲಯಕ್ಕೆ ಸಂಬಂಧಿಸಿದ ಕೃಷಿ ಕಚೇರಿಗೆ ಸಂಪರ್ಕಿಸಿ. ಅಥವಾ ಸಮೀಪದ ಕೃಷಿ ಇಲಾಖೆ ಕಚೇರಿಗೆ ತೆರಳಿ ವಿವರ ಪಡೆಯಬಹುದು. ಆನ್‌ಲೈನ್‌ನಲ್ಲಿ ಮಾಹಿತಿ ಪಡೆಯಲು ಬಯಸುವವರು PMFBY ವೆಬ್‌ಸೈಟ್ https://pmfby.gov.in/ ಗೆ ಭೇಟಿ ನೀಡಬಹುದು .
2024ರ ಹೊಸ ಫಸಲ್ ಭೀಮಾ ಯೋಜನೆಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ನೀವು ಕೂಡ ಬೆಳೆ ಪರಿಹಾರ ಫಲಾನುಭವಿಗಳಾಗಿದ್ದರೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು.
ಫಸಲ್ ಭೀಮಾ ಯೋಜನೆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗಿನಂತಿದೆ
1.PMFBY ಯ ಅಧಿಕೃತ ವೆಬ್‌ಸೈಟ್‌ಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಭೇಟಿ ನೀಡಬೇಕು https://pmfby.gov.in
2. ಫಸಲ್ ಭೀಮಾ ಯೋಜನೆಯ ಮುಖಪುಟವು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3.ಚೆಕ್ ಅಪ್ಲಿಕೇಶನ್ ಸ್ಥಿತಿ ನಿಮಗೆ ಕಾಣಿಸುತ್ತದೆ.
ಇಲ್ಲಿ ನೀವು ನಿಮ್ಮ ಬೆಳೆ ವಿಮೆಯ ರಶೀದಿ ಸಂಖ್ಯೆ ಮತ್ತು “ಕ್ಯಾಪ್ಚಾ ಕೋಡ್” ಅನ್ನು ನಮೂದಿಸಬೇಕು ಮತ್ತು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಅನ್ನು ಕ್ಲಿಕ್ ಮಾಡಬೇಕು.
4.ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ PMFBY ಪೋರ್ಟಲ್‌ಗೆ ಲಾಗ್ ಇನ್ ಆಗುತ್ತೀರಿ.
ಈ ಪ್ರಕ್ರಿಯೆಯ ಮೂಲಕ, ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು.